ಟ್ರೈಗ್ಲಿಜರೈಡ್ಸಗಳು ದೇಹದಲ್ಲಿನ ಮತ್ತು ನಾವು ಸೇವಿಸುವ ಆಹಾರದಲ್ಲಿನ ಕೊಬ್ಬುಗಳ ಒಂದು ರಸಾಯನಿಕ ರೂಪ. ನಾವು ಆಹಾರ ಸೇವಿಸಿದಾಗ ಅದನ್ನು ದೇಹವು ಟ್ರೈಗ್ಲಿಜರೈಡ್ ಆಗಿ ಪರಿವರ್ತಿಸುವುದು , ಅದನ್ನು ದೇಹಕ್ಕೆ ಅಗತ್ಯಬಿದ್ದಾಗ ಬಳಸಲು ಸಂಗ್ರಹಿಸುವುದು. ದೇಹಕ್ಕೆ ಶಕ್ತಿಯ ಅಗತ್ಯಬಿದ್ದಾಗ ಟ್ರೈಗ್ಲಿಜರೈಡುಗಳು ಬಿಡುಗಡೆಯಾಗಿ , ಉರುವಲಾಗಿ ಉರಿದು ನಮಗೆ ಅಗತ್ಯವಾದ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ನೀವು ಸಾಮಾನ್ಯವಾಗಿ ಮಾಡಿಸುವ ತಪಾಸಣೆಯ ಅಂಗವಾಗಿ , ವೈದ್ಯರು ರಕ್ತದಲ್ಲಿನ ಕೊಲೆಸ್ಟ್ರಲ್ , ಟ್ರೈ ಗ್ಲಿಜರೈಡ್ ಪ್ರಮಾಣದ ಪರೀಕ್ಷೆ ಮಾಡಿಸುವರು. ಹಲವರಿಗೆ ಅವುಗಳ ಮಟ್ಟ ಸರಿಯಾಗಿರುವುದು. ಆದರೆ ಹಲವರಿಗೆ ಅವರ ಪಥ್ಯಾಹಾರ, ತೆಗೆದುಕೊಳ್ಳುವ ಔಷಧಿ ಮತ್ತು ಅನುವಂಶೀಯತೆಯ ಪರಿಣಾಮವಾಗಿ ಕೊಲೆಸ್ಟ್ರಲ್ , ಟ್ರೈ ಗ್ಲಿಜರೈಡ್ ಪ್ರಮಾಣವು ದೇಹದ ಅಗತ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರಬಹುದು. ದುರದೃಷ್ಟವಶಾತ್ ಹೆಚ್ಚಾಗಿದ್ದರೆ ಅದು ಒಳ್ಳೆಯದಲ್ಲ.ನಿಜವಾಗಿಯೂ ನಿಮ್ಮ ರಕ್ತದಲ್ಲಿ ಕೊಲೆಸ್ಟ್ರಲ್ , ಟ್ರೈ ಗ್ಲಿಜರೈಡ್ ಪ್ರಮಾಣ ಅಧಿಕವಾಗಿದ್ದರೆ ನಿಮ್ಮ ಆರೋಗ್ಯಕ್ಕೆ ಅದು ಅಪಾಯಕರ. ಸಾಮಾನ್ಯ ಮಟ್ಟಕ್ಕಿಂತ ಕೊಲೆಸ್ಟ್ರಲ್ , ಟ್ರೈ ಗ್ಲಿಜರೈಡ್ ಪ್ರಮಾಣವು ಅಧಿಕವಾಗಿರಲು ಕೆಳಕಂಡ ಅಂಶಗಳು ಕಾರಣ : ಎದೆನೋವು ಮತ್ತು ಹೃದಯಾಘಾತದಂತೆ ಕಾಣುವ ಲಕ್ಷಣಗಳು ಪರಿಧಿ ರಕ್ತನಾಳಗಳ ರೋಗ (ಕಾಲಿನಲ್ಲಿ ಕಟ್ಟಿಕೊಂಡ ಅಪಧಮನಿಗಳು) ತಲೆ ಮತ್ತು ಕತ್ತಿನಲ್ಲಿ ಕಟ್ಟಿಕೊಂಡ ಅಪಧಮನಿಗಳ ಪರಿಣಾಮವಾಗಿ ಬರುವ ಪಾರ್ಶ್ವ ವಾಯು ಪ್ಯಾಂಕ್ರಿಯಾಟಿಟಿಸ್ ಮತ್ತು ಲಿಪೊಡಿಸ್ಟರೋಫಿ ಕೊಲೆಸ್ಟ್ರಾಲ್ ಮಟ್ಟದ ಮೇಲೆ ಪರಿಣಾಮ ಬೀರುವ ಅಂಶಗಳಾವು ? ಕೊಲಸ್ಟ್ರಾಲ್ ಮಟ್ಟದ ಮೇಲೆ ಪರಿಣಾಮ ಬೀರುವ ಅಂಶಗಳು ಹಲವಾರು. ಅವುಗಳಲ್ಲಿ ಹಲವು ನಮ್ಮ ನಿಯಂತ್ರಣದಲ್ಲಿ ಇಲ್ಲ.ಉದಾ: ಅನುವಂಶಿಯ( ಕುಟುಂಬದಲ್ಲೆ ಇರುವವು)ವಾಗಿ ಹೆಚ್ಚು ಕೊಲೆಸ್ಟ್ರಾಲ್ ಇರುಬಹುದಾದವು. ಆದರೆ ಅನೇಕ ಅಂಶಗಳನ್ನು ನಾವು ನಿಯಂತ್ರಿಸಬಹುದು. ಉದಾ: ಕೊಲೆಸ್ಟ್ರಾಲ್/ ಕಾರ್ಬೊ ಹೈಡ್ರೇಟ್ ( ಸಕ್ಕರೆ) ಅಧಿಕವಿರುವ ಆಹಾರ. ವ್ಯಾಯಾಮದ ಕೊರತೆ ಎಚ್ ಐ ವಿ ನಿಯಂತ್ರಣಕ್ಕೆ ಬಳಸುವವೂ ಸೇರಿದಂತೆ ಕೆಲವು ಔಷಧಿಗಳು ಮೂಲ: ಪೋರ್ಟಲ್ ತಂಡ