ಕೊಲೆಸ್ಟ್ರಾಲ್ ಕೊಬ್ಬಿನ ತರಹದ ವಸ್ತು . ಇದು ಮುಖ್ಯವಾಗಿ ಲೀವರ್ ನಲ್ಲಿ ಉತ್ಪಾದನೆಯಾಗುವುದು ಮತ್ತು ನಾವು ಸೇವಿಸುವ ಆಹಾರದಲ್ಲೂ ಇರುವುದು. ದೇಹವು ನಮಗೆ ಅಗತ್ಯವಾದ ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುವುದು. ಆದರೆ ನಮಗೆ ಕೊಲೆಸ್ಟ್ರಾಲ್ ಏಕೆ ಬೇಕು ? , ಖಚಿತವಾಗಿಯೂ ಕೊಲೆಸ್ಟ್ರಾಲ್ ನಿರ್ವಹಿಸಬೇಕಾದ ಅನೇಕ ಮುಖ್ಯ ಕಾರ್ಯಗಳು ಕೆಳಗಿನಂತೆ ಇವೆ: ಜೀವ ಕೋಶಗಳ ಕೋಶ ಭಿತ್ತಿಯ ರಚನೆ ಮತ್ತು ನಿರ್ವಹಣೆ. ಲೈಂಗಿಕ ಹಾರ್ಮೋನುಗಳ ಉತ್ಪಾದನೆ ಆಹಾರವನ್ನು ಜೀರ್ಣ ಮಾಡಲು ಅಗತ್ಯವಾದ ಪಿತ್ತರಸದ ಲವಣಗಳನ್ನು ಉತ್ಪಾದಿಸುವುದು ವಿಟಮಿನ್ ಡಿ ಯ ಉತ್ಪಾದನೆ ಪ್ರತಿ ದಿನ ನೀವು ಸೇವಿಸಬಹುದಾದ ಕೊಲೆಸ್ಟ್ರಾಲ್ ಪ್ರಮಾಣ ಎಷ್ಟಿರಬೇಕು ? ದೇಹದಲ್ಲಿರುವ ಹೆಚ್ಚಿನ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಹಾನಿಕರವಾದರೂ ಅದು ದೇಹದ ಅತಿ ಮುಖ್ಯವಾದ ಅಂಶಗಳಲ್ಲಿ ಒಂದಾಗಿದೆ. ಕೊಲೆಸ್ಟ್ರಾಲ್ ದೇಹದಲ್ಲಿನ ಅನೇಕ ಪ್ರಕ್ರಿಯೆಗಳಿಗೆ ಕಾರಣ ವಾಗಿದೆ. ಉದಾಹರಣೆಗೆ, ಲೈಂಗಿಕ ಸ್ಟಿರಾಯಿಡ್ ಹಾರ್ಮೋನುಗಳ ಸಂರಚನೆ ಗೆ ಇದು ಮುಖ್ಯ.ಇದು ದೇಹದಲ್ಲಿನ ಎಲ್ಲ ಜೀವ ಕೋಶಗಳ ದೃಡತೆಗೆ ಸಹಾಯ ನೀಡುವುದು.ಕಾರಣ ಕೊಲೆಸ್ಟ್ರಾಲ್ ಕೋಶ ಭಿತ್ತಿಯ ರಚನೆಯ ಪ್ರಮುಖ ಅಂಗ . ಇದರೊಂದಿಗೆ ಕೊಲೆಸ್ಟ್ರಾಲ್ ನರ ಕೋಶಗಳ ಮೇಲಿನ ಮೈಲಿನ್ ಅವರಣದ ರಚನೆಗೂ ಅಗತ್ಯ.ಹೃದಯದ ರೋಗಕ್ಕೂ ಮತ್ತು ಕೊಲೆಸ್ಟ್ರಾಲ್ಗೂ ಗಾಢವಾದ ಸಂಬಂಧವಿದ್ದರೂ ನಮ್ಮ ದೇಹಕ್ಕೆ ಕೊಲೆಸ್ಟ್ರಾಲ್ ಬೇಕು.. ಸರಿಸುಮಾರಾಗಿ, ನಮ್ಮದೇಹದ ನಿರ್ವಹಣೆಗೆ ಅಗತ್ಯವಾದ ಪ್ರಕ್ರಿಯೆಗಳನ್ನು ಜರುಗಿಸುವ ಕೊಲೆಸ್ಟ್ರಾಲ್ನ ಶೇಕಡಾ 80 ಅನ್ನು ಲಿವರ್ ಉತ್ಪಾದಿಸುವುದು. ಉಳಿದ ಬಾಗವನ್ನು ಆಹಾರದಿಂದ ಪಡೆಯಬೇಕು. ನಮ್ಮ ದೈನಂದಿನ ಕೊಲೆಸ್ಟ್ರಾಲ್ ಸೇವನೆಯ ಪ್ರಮಾಣವು 200ಮಿ. ಗ್ರಾಂ ಅನ್ನು ಮೀರ ಕೂಡದು.ಹೇಗಿದ್ದರೂ ನಮ್ಮ ದೇಹದಲ್ಲೆ ಲೀವರ್ ದಿನ ದೈನಂದಿನ ಅಗತ್ಯದ ಎಲ್ಲ ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಆಹಾರದಿಂದ ಕೊಲೆಸ್ಟ್ರಾಲ್ ಪಡೆಯುವ ಅಗತ್ಯವೆ ಇಲ್ಲ..