ಸೆಳೆತವು (ಸ್ನಾಯುಗಳ ಅನಿಯಂತ್ರಿತ ತೀವ್ರ ಆಕುಂಚನ ಅಥವಾ ಸ್ನಾಯುಗಳ ಸೆಳೆತ) ಅಪಸ್ಮಾರ ದಿಂದ ಅಥವಾ ತೀವ್ರ ಅನಾರೋಗ್ಯದಿಂದ ಬರಬಹುದು. ಆಗ ಆ ವ್ಯಕ್ತಿಯು ಉಸಿರಾಟ ನಿಲ್ಲಿಸಿದರೆ ತುಂಬ ಅಪಾಯ. ಆ ಸಂದರ್ಭದಲ್ಲಿ ವೈದ್ಯರ ನೆರವು ಪಡೆಯುವುದು ಅಗತ್ಯ. ಲಕ್ಷಣಗಳು ಮಾಂಸ ಖಂಡಗಳು ಬಿರುಸು ಮತ್ತು ಒರಟಾಗುವವು. ಜೊತೆಗೆ ಅಲುಗಾಡುವ ಚಲನೆ ಇರುವುದು ರೋಗಿಯು ನಾಲಿಗೆ ಕಡಿದುಕೊಳ್ಳಬಹುದು. ಇಲ್ಲವೆ ಉಸಿರಾಟ ನಿಲ್ಲಬಹುದು. ಮುಖ ಮತ್ತು ತುಟಿ ನೀಲಿಯಾಗುವುದು ಹೆಚ್ಚು ಜೊಲ್ಲು ಸುರಿಸಬಹುದು. ಬಾಯಲ್ಲಿ ನೊರೆ ಕಾರ್ಯನಿರ್ವಹಿಸಲು ಸೂಚನೆಗಳು ಅವನ ಸುತ್ತಲಿರುವ ಎಲ್ಲವಸ್ತುಗಳನ್ನು ತೆರವುಮಾಡಿ. ತಲೆಯ ಕೆಳಗೆ ಮೃದುವಾದದ್ದನ್ನು ಇಡಿ ರೋಗಿಯ ಬಾಯಲ್ಲಿ ಅಥವಾ ಹಲ್ಲಿನ ನಡುವೆ ಏನನ್ನೂ ಇಡಬೇಡಿ ಅವನಿಗೆ ಯಾವದೇ ದ್ರವ ನೀಡಬೇಡಿ ಅವನು ಉಸಿರಾಟವನ್ನು ನಿಲ್ಲಿಸಿದ್ದರೆ, ಶ್ವಾಸ ನಾಳವು ತೆರೆದುಕೊಂಡಿದೆಯೋ ಎಂಬುದನ್ನು ಗಮನಿಸಿ. ಇಲ್ಲವಾದರೆ ರಕ್ಷಣಾ ಕ್ರಮ ತೆಗೆದುಕೊಳ್ಳಿ ಸಮಾಧಾನವಾಗಿರಿ ಹಾಗು ಸಹಾಯ ಬರುವವರೆಗೆ ರೋಗಿಯನ್ನು ಆರಾಮಾಗಿರುವಂತೆ ನೋಡಿಕೊಳ್ಳಿ ಬಹುಪಾಲು ಸೆಳೆತಗಳ ನಂತರ ತುಸು ಸಮಯದವರೆಗೆ ಪ್ರಜ್ಞೆ ಇರುವುದಿಲ್ಲ. ಪುನಃ ಇನ್ನೊಂದು ಸೆಳೆತ ಬರಬಹುದು . ಆದಷ್ಟು ಬೇಗ ರೋಗಿಯನ್ನು ವೈದ್ಯರ ಬಳಿ ಕರದುಕೊಂಡು ಹೋಗಿ ಮೂಲ: ಪೋರ್ಟಲ್ ತಂಡ