ಕತ್ತರಿಸಿದ ಗಾಯಗಳು ಆ ಜಾಗವನ್ನು ಸೋಪು ಮತ್ತು ಬೆಚ್ಚಗಿನ ನೀರು ಹಾಕಿ ಚೆನ್ನಾಗಿ ತೊಳೆಯಿರಿ. ಮಣ್ಣು ಇದ್ದರೆ ಹುಷಾರಾಗಿ ತೊಳೆಯಿರಿ. ಗಾಯದ ಮೇಲೆ ರಕ್ತ ನಿಲ್ಲುವವರೆಗೆ ನೇರವಾಗಿ ಒತ್ತಡಹಾಕಿ ಗಾಯಕ್ಕೆ ಸ್ಟೆರೈಲ್ ಬ್ಯಾಂಡೇಜು ಹಾಕಿ. ಗಾಯವು ಆಳವಾಗಿದ್ದರೆ ಕೂಡಲೇ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ತರೆಚುಗಾಯ ಸೋಪು ಮತ್ತು ಬೆಚ್ಚಗಿನ ನೀರಿನಿಂದ ಗಾಯವನ್ನು ತೊಳೆಯಿರಿ. ಅದರಿಂದ ರಕ್ತ ಸುರಿಯುತ್ತಿದ್ದರೆ, ಒಸರುತ್ತಿದ್ದರೆ ಅದನ್ನು ಸೋಂಕಿನಿಂದ ರಕ್ಷಿಸಲು ಬ್ಯಾಂಡೇಜು ಹಾಕಿ. ಸೋಂಕು ತಗುಲಿದ ಗಾಯದ ಚಿಹ್ನೆಗಳು ಬಾವು ಕೆಂಪಾಗುವುದು ನೋವು ಜ್ವರ ಬರಬಹುದು ಕೀವು ಆಗ ಬಹುದು ಮೂಲ: ಪೋರ್ಟಲ್ ತಂಡ