ಎಚ್ಚರ ತಪ್ಪುವ ಮೊದಲು ಆ ವ್ಯಕ್ತಿಯು ಕೆಳಗಿನ ತೊಂದರೆ ಬಗ್ಗೆ ದೂರಬಹುದು. ತಲೆ ಹಗುರಾದಂತೆ ಅನಿಸುವುದು ನಿಶಕ್ತಿ ತಲೆ ಸುತ್ತುವುದು ಚರ್ಮ ಬಿಳಿಚಿಕೊಳ್ಳುವುದು ಮುಂದಕ್ಕೆ ಬಾಗ ಬೇಕು ತಲೆಯನ್ನು ಮೊಣಕಾಲಮೇಲೆ ಇಟ್ಟುಕೊಳ್ಳ ಬೇಕು ರೋಗಿಯು ಪ್ರಜ್ಞಾಹೀನನಾಗುವನು ಎನಿಸಿದಾಗ ಅವನು... ತಲೆಯನ್ನು ಹೃದಯದ ಮಟ್ಟಕ್ಕಿಂತ ಕೆಳಗೆ ತಂದಾಗ ರಕ್ತವು ಮೆದುಳಿಗೆ ಹರಿಯುವುದು ಅವನು ಪ್ರಜ್ಞೆ ತಪ್ಪಿದಾಗ ಅವನನ್ನು ಕಾಲು ಎತ್ತರದಲ್ಲಿ, ತಲೆ ತುಸು ಕೆಳಗೆ ಇರುವಂತೆ ಮಲಗಿಸಿ ಉಡುಪು ಬಿಗಿಯಾಗಿದ್ದರೆ ಸಡಲಿಸಿ ಮುಖ ಮತ್ತು ಕೊರಳಿನ ಮೇಲೆ ತಂಪಾದ , ಒದ್ದೆ ಬಟ್ಟೆ ಹಾಕಿಬಹಳ ಸಂದರ್ಭದಲ್ಲಿ ಮೇಲೆ ತಿಳಿಸಿದಂತೆ ಮಾಡಿದರೆ ಅವನಿಗೆ ಪ್ರಜ್ಞೆ ಬರುವುದು.ಅವನಿಗೆ ಎಚ್ಚರ ಬಂದ ಮೇಲೆ ಅವನ ಬಗ್ಗೆ ಕೇಳಿ ಪರಿಚಯ ಮಾಡಿಕೊಳ್ಳಿ. ವೈದ್ಯರ ಸಲಹೆ ಪಡೆಯುವುದು ಬಹಳ ಉತ್ತಮ. ಮೂಲ: ಪೋರ್ಟಲ್ ತಂಡ