ದೈಹಿಕ, ಮಾನಸಿಕ ಮತ್ತು ಸಾಮಾಜಿಕ ನೆಮ್ಮದಿಯ ಸ್ಥಿತಿಯೇ ಆರೋಗ್ಯ. ಆರೋಗ್ಯಕ್ಕೆ ಏನು ಬೇಕು? • ಪೌಷ್ಠಿಕ ಆಹಾರ (ಧಾನ್ಯ, ಹಣ್ಣು, ತರಕಾರಿ, ಹಾಲು,ಮೊಟ್ಟೆ,ಮೀನು, ಮಾಂಸ ಇತ್ಯಾದಿ ಸಮತೋಲನ ಆಹಾರ) • ಶುದ್ಧ ಕುಡಿಯುವ ನೀರು, ಉತ್ತಮ ಪರಿಸರ • ಮನೆಯ ಮತ್ತು ಸುತ್ತಮುತ್ತ ಶುದ್ಧಗಾಳಿ, ಸಾಕಷ್ಟು ಬೆಳಕು, ಸ್ವಚÀ್ಛತೆ • ಸಾಮಾಜಿಕ ಪರಿಸರ ಎಂದರೆ ಜಾತಿ, ಧರ್ಮ, ಲಿಂಗ ಸಮಾನತೆ ಇರುವ ಸಮಾಜ • ವೈಯಕ್ತಿಕ ಸ್ವಚ್ಛತೆ • ಸಾಂಸ್ಕøತಿಕ ನೆಮ್ಮದಿ ಮತ್ತು ಮನರಂಜನೆ • ದುಶ್ಚಟಗಳಿಂದ ದೂರವಿರುವುದು ಹಾಗಿರುವಾಗ ಆರೋಗ್ಯ ಕಾಪಾಡಲು ವೈದ್ಯರು ಬೇಕೆ? ನೀವೇ ಸಾಕೆ? ಆರೋಗ್ಯಕ್ಕೆ ವೈದ್ಯರು ಬೇಡ, ಅನಾರೋಗ್ಯಕ್ಕೆ ಮಾತ್ರ ವೈದ್ಯರು ಬೇಕು!!! ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುವು? • ಸಾಮಾಜಿಕ ಕಾರಣಗಳು:(ಲಿಂಗಭೇದ,ಜಾತಿಭೇದ ಇತ್ಯಾದಿ) ಉದಾಹರಣೆಗೆ ಮಹಿಳೆಯರು ಮತ್ತು ಪುರುಷರ ಊಟದಲ್ಲಿ ವ್ಯತ್ಯಾಸ, ಜಾತಿಯ ಕಾರಣದಿಂದ ಮೂಲ ಸೌಕರ್ಯಗಳನ್ನು ವಂಚಿಸುವುದು, ಇತ್ಯಾದಿ. • ಆರ್ಥಿಕ ಕಾರಣಗಳು:ಬಡತನ, ನಿರುದ್ಯೋಗ, ಕಡಿಮೆ ಕೂಲಿ, ಇತ್ಯಾದಿ ಕಾರಣಗಳು ಉದಾಹರಣೆಗೆ- ಬಡತನದಿಂದಾಗಿ ಸರಿಯಾದ ಆಹಾರ ಸಿಗದಿರುವುದು, ಇದರಿಂದಾಗಿ ರಕ್ತಹೀನತೆ ಮುಂತಾದ ತೊಂದರೆಗಳು ಉಂಟಾಗುವುದು, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯ ವಾಗದಿರುವುದು • ರಾಜಕೀಯ ಕಾರಣಗಳು: ಉದಾಹರಣೆಗೆ-ಆರೋಗ್ಯಕ್ಕೆ ನೀಡಲಾಗುವ ಹಣಕಾಸಿನ ಹಂಚಿಕೆ ಸರಿಯಾಗಿ ಆಗದೆ ಇರುವುದು. ಮೂಲಭೂತ ಸೌಕರ್ಯಗಳನ್ನು ಸಕಾಲಕ್ಕೆ ಒದಗಿಸದೆ ಇರುವುದು, ಸರಕಾರಿ ನೀತಿ (ಕೈಗಾರಿಕ ಹಾಗೂ ಕೃಷಿಗೆ ನೀಡುವ ಅನುದಾನ ಮತ್ತು ರಿಯಾಯಿತಿಗಳಲ್ಲಿ ವ್ಯತ್ಯಾಸವಿರುವುದು, ಮತ್ತದರಿಂದ ಕೆಲಸಗಾರರು ಪಡೆಯುವ ಸಂಭಾವನೆಯಲ್ಲಿ ವ್ಯತ್ಯಯ) • ಶೈಕ್ಷಣಿಕ ಕಾರಣಗಳು:ಅನಕ್ಷರತೆ,ಮೂಢನಂಬಿಕೆಗಳು ಆರೋಗ್ಯದ ಬಗ್ಗೆ ಅರಿವಿಲ್ಲದಿರುವುದು.ಯಂತ್ರ ಮಂತ್ರ ಇತ್ಯಾದಿಗಳ ಮೊರೆ ಹೋಗುವುದು. ಇವೆಲ್ಲಾ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.