ಮಕ್ಕಳ ಸಾವಿಗೆ ಮತ್ತು ನೋವಿಗೆ ತೀವ್ರ ಶ್ವಾಸಕೋಶದ ಸೋಂಕು (ಎ.ಆರ್.ಐ.) ಮುಖ್ಯವಾದ ಕಾರಣವಗಿರುತ್ತದೆ. 5 ವರ್ಷದೊಳಗಿನ ಬಹಳಷ್ಟು ಮಕ್ಕಳು ತೀವ್ರ ಶ್ವಾಸಕೋಶದ ಸೋಂಕಿಗೆ ತುತ್ತಾಗುತ್ತಾರೆ. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಕೆಲಬು ಮಕ್ಕಳಿಗೆ ನಿಮೋನಿಯಾ ರೋಗ ಬರಬಹುದು. ಅದರಿಮದ ಸಾವು ಸಂಭವಿಸಬಹುದು. ಮಗು ಈ ಕೆಳಗಿನ ಕೆಲವು ಲಕ್ಷಣಗಳು ಅಥವಾ ಎಲ್ಲಾ ಲಕ್ಷಣಗಳನ್ನು ಹೊಂದಿರುತ್ತವೆ. ಕೆಮ್ಮು ಮೂಗಿನಲ್ಲಿ ಸೋರುವುದು ಜ್ವರ ಉಸಿರಾಟದಲ್ಲಿ ತೊಂದರೆ ಉಸಿರಾಟದ ದರ ಬೇಗ ಪತ್ತೆ ಹಚ್ಚಿದರೆ ಮತ್ತು ಚಿಕಿತ್ಸೆ ನೀಡಿದರೆ/ಸಕಾಲದಲ್ಲಿ ಮೇಲಿನ ಆಸ್ಪತ್ರೆಗೆ ಕಳುಹಿಸಿದ್ದಲ್ಲಿ, ತೀವ್ ನೋಬು ಮತ್ತು ಮರಣವನ್ನು ತಡೆಗಟ್ಟಲು ಸಾಧ್ಯ. ಕೆಮ್ಮು ಮತ್ತು ಶೀಲವಾಗಿದ್ದಾಗ ಆರೈಕೆ ಮಗುವನ್ನು ಬೆಚ್ಚಗಿಡಬೇಕು. ಹೆಚ್ಚು ಹೆಚ್ಚು ದ್ರವ ಪದಾರ್ಥ ಕೊಡಬೇಕು ಮತ್ತು ಎದೆಹಾಲು ಉಣ್ಣಿಸುವುದರನ್ನು ಮುಂದುವರಿಸಬೇಕು. ಮನೆಯ ಔಷಧಗಳನ್ನು ಕೊಡಿ-ಜೇನುತುಪ್ಪ, ನಿಂಬೆಹಣ್ಣಿನ ರಸ, ಶುಂಠಿ, ಖಡ ಇತ್ಯಾದಿ. ಮಗು ಗುಣಮುಖವಾದ ಮೇಲೆ ಹೆಚ್ಚು ಆಹಾರ ಕೊಡಬೇಕು. ಮಗು ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳಲು ಬಿಡಬೇಕು. ಮಕ್ಕಳಿಗೆ ಕಾಯಿಲೆಗಳನ್ನು ತಡೆಗಟ್ಟಲು ಸಕಾಲದಲ್ಲಿ ರಕ್ಷಣಾ ಚಿಕಿತ್ಸೆ ನೀಡುವುದು ಸಹ ಸಹಾಯ ಮಾಡುತ್ತದೆ. ಸಕಾಲದಲ್ಲಿ 'ಎ' ಅನ್ನಾಂಗ ಪಾಕ ಕೊಡುವುದು. ಉತ್ತಮ ಪೌಷ್ಠಿಕತೆ ಮತ್ತು ಶೀತ, ದೂಳು ಮತ್ತು ಹೊಗೆಯಿಂದ ಮಗುವನ್ನು ದೂರವಿಡುವುದರಿಂದ ನಿಮೋನಿಯಾ ತಡೆಗಟ್ಟಲು ಸಹಾಯಕವಾಗುತ್ತದೆ. ಮೂಲ:ಆಶಾ ಕಲಿಕೆ ಕೈಪಿಡಿ