ಮಲೇರಿಯಾ ರೋಗ ಗರ್ಭಾವಸ್ಥೆಯಲ್ಲಿ ಮಹಿಳೆಗೆ ಸಾವನ್ನುಂಟುಮಾಡಬಹುದು ಮತ್ತು ಗರ್ಭಪಾತ, ನಿರ್ಜೀವ ಜನನ, ಕಡಿಮೆ ತೂಕದ ಮಗುವಿನ ಜನನ, ಅಥವಾ ದಿನ ತುಂಬದ ಹೆರಿಗೆಗೂ ಸಹ ಕಾರಣವಾಗಬಹುದು. ಎಲ್ಲಾ ಗರ್ಭಿಣಿಯರು ಬೇಗನೆ ದಾಖಲಾತಿ ಮಾಡಿಸಿಕೊಳ್ಳಬೇಕು (12-16 ವಾರಗಳು) ನಂತರ ಹೆರಿಗೆಗೆ ಮೊದಲು ಕನಿಷ್ಠ ಪಕ್ಷ 3 ಬಾರಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮತ್ತು ಸಾಧ್ಯವಾದ ಮಟ್ಟಿಗೆ ಹೆರಿಗೆಗಳು ಆಸ್ಪತ್ರೆಗಳಲ್ಲೆ ನಡೆಯಬೇಕು. ಮೂಲ :ಆಶಾ ಕಲಿಕೆ ಕೈಪಿಡಿ