ಶ್ವಾಸನಾಳ, ಗಂಟಲು, ಬಾಯಿ ಅಥವಾ ಚರ್ಮದ ಗಾಯಗಳ ಮೇಲೆ ಟಿಫ್ತೀರಿಯಾ ಸೋಂಕು ದಾಳಿ ಮಾಡಬಹುದು. ಕಾರಣ ಕೊರಿನೇ ಬ್ಯಾಕ್ಟೀರಿಯಂ ಡಿಫ್ತೀರಿಯಾ ಎಂಬ ಬ್ಯಾಕ್ಟೀರಿಯಾ ಸೋಂಕಿನಿಂದ ಡಿಫ್ತೀರಿಯಾ ಬರುತ್ತದೆ. ಲೋಳೆ ಪದರದಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಅಲ್ಲದೆ ಈ ಬ್ಯಾಕ್ಟೀರಿಯಾ ಉತ್ಪತ್ತಿ ಮಾಡುವ ಟಾಕ್ಸಿನ್ ಹೃದಯದ ಸ್ನಾಯುಗಳ ಉರಿಯೂತಕ್ಕೆ ಕಾರಣವಾಗಿ ರಕ್ತನಾಳಗಳಿಗೆ ಹಾನಿ ಉಂಟು ಮಾಡುತ್ತದೆ. ಲಕ್ಷಣಗಳು ಮೂಗು ಸೋರುವುದು ಗಂಟಲ ನೋವು ಜ್ವರ ಅಸೌಖ್ಯ ತಡೆಗಟ್ಟುವಿಕೆ ಡಿಪಿಟಿ ರೋಗ ನಿರೋಧಕ ಲಸಿಕೆ ನೀಡಿ ಮಕ್ಕಳನ್ನು ಡಿಫ್ತೀರಿಯಾದಿಂದ ರಕ್ಷಿಸಿ. ವಿವರಗಳಿಗಾಗಿ ಮಕ್ಕಳ ರೋಗನಿರೋಧಕ ಚುಚ್ಚುಮದ್ದು ನೀಡಿಕೆ ಪಟ್ಟಿಯನ್ನು ಪರಿಶೀಲಿಸಿ.ನಿಮ್ಮ ಮಗು ಡಿಫ್ತೀರಿಯಾ ದಿಂದ ನರಳುತ್ತಿದೆ ವೆನ್ನಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಡಿಫ್ತೀರಿಯಾ ಜೀವಕ್ಕೆ ಅಪಾಯ ತಂದೊಡ್ಡುವ ರೋಗ. ಮೂಲ:ಪೋರ್ಟಲ್ ತಂಡ