1. ನೆನಪಿನ ಶಕ್ತಿ ವೃದ್ಧಿಯಾಗಲು ದಿನಾಲು ಸರ್ವಾಂಗಾಸನ ಹಾಗೂ ಭ್ರಾಮರಿ ಪ್ರಾಣಾಯಾಮ ಮಾಡುವುದು.2. ನೆನಪಿನ ಶಕ್ತಿ ವೃದ್ಧಿಗೆ ದಿನಾಲು 2 ಚಮಚ ಜೇನನ್ನು ಹಾಲಿಗೆ ಹಾಕಿ ಸೇವಿಸುವುದು.3. ಮೆದುಳು ಹುಣ್ಣು ವಾಸಿಯಾಗಲು ಮೂಗಿನಲ್ಲಿ ತಲಾ 3 ಹನಿ ಪಂಚಗವ್ಯ ಘೃತ ಹಾಕಬೇಕು.4. ತಲೆಗೆ ಶ್ಯಾಂಪು ಬಳಸಬಾರದು.5. ತಲೆ ದಿಂಬು ದೊಡ್ಡದಾಗಿರಬಾರದು.6. ವಿಪರೀತ ಮಾನಸಿಕ ಒತ್ತಡ ಮಾಡಿಕೊಳ್ಳಬಾರದು.7. ಜೀರಿಗೆ ಕಷಾಯ ಸೇವಿಸಬೇಕು.8. ತಲೆಗೆ ಬದಾಮಿ ಎಣ್ಣೆ ಉಪಯೋಗಿಸಬೇಕು.9. ಅಮೃತಬಳ್ಳಿ ಅಥವಾ ತುಳಸಿ ಕಷಾಯ ಸೇವಿಸಬೇಕು.10. ಮೆದುಳು ತೊಂದರೆ ಬಾರದಂತೆ ತಡೆಯಲು ಆಕಳ ಹಾಲು 1 ಲೋಟ, 2 ಚಮಚ ಜೇನು, 1 ಚಮಚ ಆಕಳ ತುಪ್ಪ ಹಾಕಿ ಸೇವಿಸಬೇಕು.11. ಜಲನೇತಿ ಅಥವಾ ಕುಂಜರ ಕ್ರಿಯೆಯನ್ನು ನಡೆಸುವುದರಿಂದ ಮೆದುಳು ತೊಂದರೆ ಇರುವುದಿಲ್ಲ.ಎಲ್ಲ ವ್ಯಾಧಿಗಳಿಗೆ ಸಂಬಂಧಪಟ್ಟ ಪಥ್ಯ ಕ್ರಮಗಳನ್ನು ಸೂಚಿಸಲಾಗಿದೆ. ಅವುಗಳನ್ನು ಅನುಸರಿಸುವುದು. ಮೂಲ: ವಿಕ್ರಮ