ರಸಾಯನಿಕದದಿಂದ ಸುಟ್ಟಾಗ,ಕಣ್ಣು ರಸಾಯನಿಕದ ಜತೆ ಸಂಪರ್ಕಕ್ಕೆ ಬಂದ -ಎಲ್ಲ ಪ್ರಕರಣಗಳಲ್ಲಿ ತಕ್ಷಣ ಕಣ್ಣನ್ನು ನೀರಿನಿಂದ ಅಥವ ಕುಡಿಯಬಹುದಾದ ಪಾನಿಯದಿಂದ ಫ್ಲಷ್ ಮಾಡಿ. ನೀರಿನ ಪ್ರವಾಹದ ಕೆಳಗೆ ಇಲ್ಲವೆ ತುಂತುರಿನ ಕೆಳಗೆ ಹಿಡಿಯಿರಿ. ಕಣ್ಣನ್ನು ಆದಷ್ಟು ಅಗಲವಾಗಿಸಿ ಹಿಡಿಯಿರಿ ಕನಿಷ್ಟ 1 5 ನಿಮಿಷ ಫ್ಲಷ್ ಮಾಡಿ. ಐ ಕಪ್ಪನ್ನು ಉಪಯೋಗಿಸಬೇಡಿ ಕಣ್ಣಿನಲ್ಲಿ ಕಾಂಟ್ಯಾಕ್ಟ ಲೆನ್ಸ ಇದ್ದರೆ ತಕ್ಷಣ ಅದರ ಮೇಲೆ ಫ್ಲಷ್ ಮಾಡಿ . ಇದರಿಂದ ಅನ್ಯ ವಸ್ತುವು ಹೊರಬರಬಹುದು. ಮಸೂರದ ಮೇಲಿನ ಅನ್ಯ ವಸ್ತುವು ನೀರಿನಿಂದ ತೊಳೆದಾಗ ಅದು ಅಲ್ಲಿಂದ ಸರಿಯಬಹುದು.. ಕಣ್ಣಿಗೆ ಪಟ್ಟಿ ಕಟ್ಟ ಬೇಡಿ ತೊಳೆದ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ.. ಕಣ್ಣಿನಲ್ಲಿ ಕಣಗಳು ಕಣ್ಣು ಉಜ್ಜ ಬೇಡಿ. ಕಣ್ಣಿರಿನಿಂದಲೆ ಅನ್ಯವಸ್ತುವ ಹೊರಬರುವಂತೆ ಪ್ರಯತ್ನಿಸಿ ಅಥವ ಐ ವಾಷ್ ಉಪಯೋಗಿಸಿ. ಮೇಲ ರೆಪ್ಪೆಯನ್ನು ಮೇಲಕ್ಕೆಎತ್ತಿ ಕೆಳ ರೆಪ್ಪೆಯನ್ನು ಕೆಳಕ್ಕೇ ಸರಿಸಿ ಅನ್ಯ ವಸ್ತುವನ್ನು ಹೊರತೆರೆಯಲಯಪ್ರಯತ್ನಿಸಿ. . ಅನ್ಯ ವಸ್ತುವು ಹೊರಬರದಿದ್ದರೆ ಕಣ್ಣನ್ನು ಹಾಗೆಯೇ ಮುಚ್ಚಿರಿ , ಹಗುರವಾಗಿ ಬಟ್ಟೆ ಕಟ್ಟಿ , ವೈದ್ಯರಲ್ಲಿಗೆ ತಕ್ಷಣ. ಕಣ್ಣಿಗೆ ಗಾಳಿ ಊದಿ. ಒದ್ದೆ ಬಟ್ಟೆಯೀದ ಒತ್ತಿ. ಪುಡಿಮಾಡಿದ ಬರ್ಫವನ್ನು ಪ್ಲಾಸ್ಟಿಕ್ ನಿಂದ ಸುತ್ತಿ ಹಣೆಯ ಮೇಲಿಡಿ. ಗಾಯವಾದ ಕಣ್ಣಿನ ಮೇಲೆ ಅದು ಹಗುರವಾಗಿ ಕೂರಬೇಕು,. ನೋವಿದ್ದರೆ, ದೃಷ್ಟಿ ಪಾಟ ಕಡಿಮೆಯಾದರೆ,ಅಥವ ಬಣ್ಣಗೆಟ್ಟರೆ ( ಕಣ್ಣು ಕಪ್ಪಾದರೆ) ತುರ್ತು ವೈದ್ಯಕೀಯ ಆರೈಕೆ ಪಡೆಯಿರಿ. ಈ ಯಾವುದೆ ಲಕ್ಷಣವು ಕಣ್ಣಿನ ಒಳ ಭಾಗದಲ್ಲಿನ ಹಾನಿಯನ್ನು ಸೂಚಿಸಬಹುದು ಕಣ್ಣು ಮತ್ತು ರೆಪ್ಪೆ ಗೆ ತೂತಾಗುವುದು. ಕಣ್ಣನ್ನು ನೀರು ಅಥವ ಯಾವುದೆ ದ್ರವದಿಂದ ತೊಳೆಯ ಬೇಡಿ. ಕಣ್ಣಿನಲ್ಲಿ ಸಿಕ್ಕಿಹಾಕಿಕೊಂಡಿರುವ ವಸ್ತುವನ್ನು ತೆಗೆಯಲು ಪ್ರಯತ್ನಿಸಬೇಡಿ ಕಣ್ಣನ್ನು ಗಟ್ಟಿಯಾದ ಕಾಗದದಿಂದ ಒತ್ತಡ ಬೀಳದಂತೆ ಮುಚ್ಚಿ. ವೈದ್ಯರನ್ನು ತಕ್ಷಣ ನೋಡಿ. ಸಾಮಾನ್ಯ ಎಚ್ಚರಿಕೆಗಳು ಕಣ್ಣಿಗೆ ಇಜ್ಜಲ ಚೂರು, ಕಟ್ಟಿಗೆ, ಮರಳು ಇತ್ಯಾದಿಗಳು ಬಿದ್ದಾಗ ಕಣ್ಣನ್ನು ಉಜ್ಜಬೇಡಿ ಕಣ್ಣನ್ನು ಅಗಲವಾಗಿ ತೆಗೆದು ಶುದ್ಧವಾದ ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ. ಚೂಪಾದ ವಸ್ತುಗಳೀಂದ –ಗರಿಕೆಯ ಎಸಳು. ಪೇಪರ್ ಮತ್ತು ಪೆನ್ಸಿಲ್ ನ ತುದಿಯಿಂದ, ಸುಟ್ಟ ಗಾಯ ಬಿಸಿ ನೀರು ಎಣ್ಣೆ ,ಉಗಿ , ಬಿಸಿಬೂದಿ ಪಟಾಕಿ, ಕಾಷ್ಟಿಕ್ ಸೋಡಾ, ಸುಣ್ಣ , ಆಮ್ಲ ಮತ್ತು ಇತರ ರಸಾಯನಿಕಗಳಿಂದ ಆಗಿದ್ದರೆ ಕಣ್ಣನ್ನು ನೀರಿನಿಂದ ತೊಳೆಯಿರಿ. ವೈದ್ಯಕೀಯ ಸಲಹೆಯನ್ನು ಅರ್ಹ ನೇತ್ರ ವೈದ್ಯರಿಂದ ತಕ್ಷಣ ಪಡೆಯಿರಿ. ಕಣಿಗೆ ಮೂಕ ಪೆಟ್ಟು ಬಿದ್ದಾಗ , ರೋಗಿಯನ್ನು ಆರಾಮಾಗಿ ನೇರವಾಗಿ ಮಲಗಿಸಿ . ಕಣ್ಣಿಗೆ ಶುದ್ಧ ಬಟ್ಟೆಯಿಂದ ಪಟ್ಟಿಕಟ್ಟಿ ಕಣ್ಣಿನ ವೈದ್ಯರ ಸಲಹೆಯನ್ನು ಆದಷ್ಟುಬೇಗ. ಪಡೆಯಿರಿ. ತಡೆಗಟ್ಟಲು ಕ್ರಮಗಳು ಅಪಾಯಕಾರಿ ಕ್ರೀಡೆಯಲ್ಲಿ ಅಥವ ಕೆಲಸದಲ್ಲಿ ತೊಡಗಿದಾಗ ಮನೆಯಲ್ಲಿ , ಪ್ರವಾಸದಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಕಣ್ಣಿನ ರಕ್ಷಣೆಬಗ್ಗೆ ಗಮನಿರಲಿ. ಮನೆಯಲ್ಲಿ, ಕೆಲಸದ ಜಾಗದಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇರಲಿ. ನಿಮ್ಮ ಪ್ರವಾಸದ ಚೀಲದಲ್ಲಿ ಕಣ್ಣಿನ ಕವಚ ಮತ್ತು ಗಾಯವಾದಾಗ ಅಗತ್ಯವಾದ ಐ ವಾಷ್ ಇರಲಿ. ಕಣ್ಣಿನ ಗಾಯವನ್ನು ನಿರಪಾಯಕಾರಿ ಎಂದು ಭಾವಿಸಬೇಡಿ. ಅನುಮಾನ ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಕಣ್ಣಿನ ಆರೋಗ್ಯದ ಉತ್ತಮ ಅಭ್ಯಾಸಗಳು ಮತ್ತು ಪ್ರಥಮ ಚಿಕಿತ್ಸೆ. ಕಣ್ಣನ್ನು ಮತ್ತು ಕಣ್ಣಿನ ಸುತ್ತಲಿನ ಚರ್ಮವನ್ನು ಶುದ್ಧ ನೀರು ಮತ್ತು ಸೋಪಿನಿಂದ ತೊಳೆದು ಶುಚಿಮಾಡಿ. ಮಲಗುವ ಮುನ್ನ ಕಣ್ಣುಗಳನ್ನು ತೊಳೆಯುವುದು ಅತಿ ಮುಖ್ಯ. ದಿನವೆಲ್ಲ ಸಂಗ್ರಹವಾದ ಧೂಳು ಮತ್ತು ಕಸವನ್ನು ಅದರಿಂದ ತೆಗೆದುಹಾಕಬಹುದು. ಬೇರೆಯವರ ಟವಲ್ , ಕರವಸ್ತ್ರವನ್ನು ಎಂದೂ ಉಪಯೋಗಿಸ ಬೇಡಿ. ಹಳೆಯ ಬಟ್ಟೆಯಿಂದ ಕಣ್ಣು ಒರೆಸಬೇಡಿ ಇದರಿಂದ ಸೋಂಕು ಬರಬಹುದು.. ಕಾಡಿಗೆ ಅಥವ ಸುರ್ಮಾ ಅಥವ ಇನ್ನು ಯಾವುದೋ ವಸ್ತುವನ್ನು ಕಣ್ಣಿಗೆ ಹಚ್ಚಬೇಡಿ. ಬಳಸಲೇ ಬೇಕಿದ್ದರೆ ಪ್ರತಿಯೊಬ್ಬರೂ ಪ್ರತ್ಯೇಕವಾದುದನ್ನು ಬಳಸಿ. ಧೂಳು, ಹೊಗೆ, ಮತ್ತು ಪ್ರಖರ ಬೆಳಕಿಗೆ ಕಣ್ಣು ಒಡ್ಡಬೇಡಿ ಬರಿ ಕಣ್ಣಿನಿಂದ ಸೂರ್ಯ ಗ್ರಹಣ ನೋಡಬೇಡಿ ನೊಣಗಳು ಸೋಂಕಿತ ಮನುಷ್ಯನಿಂದ ಅರೋಗ್ಯವಂತನಿಗೆ ರೋಗಗಳನ್ನು ಹರಡುವವು.ನಿಮ್ಮ ಪರಿಸರ ಶುಚಿಯಾಗಿರಲಿ. ಡಯಾಬೆಟಿಸ್ ಮತ್ತು ರಕ್ತದ ಏರು ಒತ್ತಡವು ದೃಷ್ಟಿಗೆ ಹಾನಿ ಮಾಡಬಹುದು.ಅವು ನಿಯಂತ್ರಣದಲ್ಲಿ ಇರಲಿ.ನಿಯಮಿತವಾಗಿ ಕಣ್ಣು ಪರೀಕ್ಷೆ ಮಾಡಿಸಿಕೊಳ್ಳಿ. ಎಲ್ಲ ಟಾಕ್ಸಿಕ್ ಔಷಧಗಳು,ಪಾನೀಯಗಳು, ತಂಬಾಕು ಆರೋಗ್ಯಕ್ಕೆ ಹಾನಿಕರ. ಅದರಲ್ಲೂ ಕಣ್ಣಿಗೆ ಹೆಚ್ಚು ಹಾನಿಕರ. ಅವನ್ನು ದೂರಮಾಡಿ.. ಮಕ್ಕಳನ್ನು ಅಪಾಯಕಾರಿ ಆಟಗಳಾದ ಬಿಲ್ಲು ಬಾಣ, ಗಿಲ್ಲಿ ದಾಂಡು ಮತ್ತು ಚೂಪಾದ ಅಂಚಿರುವ ಆಟಿಕೆಗಳಿಂದ ದೂರವಿಡಿ. ವಯಸ್ಕರ ಮೆಲ್ವಿಚಾರಣೆ ಇಲ್ಲದೆ ಪಟಾಕಿ ಸುಡಲು ಮಕ್ಕಳನ್ನು ಬಿಡಬೇಡಿ ವೆಲ್ಡಿಂಗ್ ಮತ್ತು ಮರಗೆಲಸ ಮಾಡುವಾಗ ರಕ್ಷಣಾ ಕನ್ನಡಕ ಹಾಕಿಕೊಳ್ಳಿ. ಸ್ವಯಂ ವೈದ್ಯ ಬೇಡ. ರಸ್ತೆ ಬದಿ ಔಷಧಿ ಮಾರವುವರಿಂದ, ನಕಲಿವೈದ್ಯರಿಂದ ಚಕಿತ್ಸೆಬೇಡ.ಕಣ್ಣಿನ ಸಮಸ್ಯೆಇದ್ದರೆ ನೇತ್ರ ತಜ್ಞರನ್ನು ಭೇಟಿಯಾಗಿ. ಕನ್ನಡಕ ಹಾಕುತ್ತಿದ್ದರೆ ಅದರ ಗಾಜನ್ನು ಶುಚಿಯಾಗಿಡಿ.ಅದರಮೇಲೆ ಗೀರುಗಳು ಇರಬಾರದು. ಬೇರೆಯವರ ಕನ್ನಡಕವನ್ನು ಯಾವಾಗಲೂ ಉಪಯೋಗಿಸ ಬೇಡಿ. ಅದರಿಂದ ಸೋಂಕು ಬರಬಹುದು. ಮಕ್ಕಳು ಕಣ್ಣು ಮುಚ್ಚಾಲೆ ಆಟ ಅಡುವುದನ್ನು ನಿರುತ್ತೇಜಿಸಿ. ಒಬ್ಬರ ಕಣ್ಣು ಇನ್ನೊಬ್ಬರು ಮುಟ್ಟುವುದರಿಂದ ರೋಗ ಪ್ರಸಾರ ವಾಗುವುದು. . ಅಡುಗೆ ಮಾಡುವಾಗ ಸೋಡಾ ಉಪಯೋಗಿಸ ಬೇಡಿ ಅದು ವಿಟಮಿನ್ ಗಳನ್ನು ನಷ್ಟ ಮಾಡುವುದು. ಓದುವ ಒಳ್ಳೆಯ ಅಭ್ಯಾಸಗಳು. ಮುದ್ರಿತ ಪುಸ್ತಕವನ್ನು ಕಣ್ಣಿನಿಂದ ಒಂದೂವರೆ ಅಡಿ ದೂರದಲ್ಲಿ 45 ರಿಂದ 70 ಡಿಗ್ರಿ ಕೋನದಲ್ಲಿ ಇರುವಂತೆ ಹಿಡಿದು ಓದಬೇಕು.. ಚಲಿಸುವ ಬಸ್ಸಿನಲ್ಲಿ, ರೈಲಿನಲ್ಲಿ ಓದಬೇಡಿ.ಮಲಗಿ ಮತ್ತು ಮಂದ ಬೆಳಕಿನಲ್ಲಿ ಓದಬಾರದು ಸಾಕಷ್ಟು ಬೆಳಕಿಲ್ಲದಾಗ ಚಿಕ್ಕ ಅಕ್ಷರಗಳನ್ನು ಓದಬೇಡಿ ಓದುವಾಗ ಅಥವ ಕಣ್ಣಿಗೆ ಒತ್ತಡ ತರುವ ಕೆಲಸ ಮಾಡುವಾಗ ಆಗಾಗ ಕಣ್ಣು ಮುಚ್ಚಿ, ಇಲ್ಲವೆ ದೂರದ ವಸ್ತುಗಳನ್ನು ನೋಡಿ ಕಣ್ಣಿಗೆ ಒಂದು ನಿಮಿಷ ವಿಶ್ರಾಂತಿ ಕೊಡಿ. ಮೂಲ :ಕಣ್ಣಿನ ಆರೋಗ್ಯ ಸಮುದಾಯಕ್ಕೆ ಒಂದು ಕೈಪಿಡಿಅಂತರಾಷ್ಟ್ರೀಯ ಮುಂದುವರೆದ ಗ್ರಾಮೀಣ ಕಣ್ಣಿನ ಆರೈಕೆ ಕೇಂದ್ರ ಎಲ್. ವಿ. ಪ್ರಸಾದಸಂಸ್ಥೆ, ರಾಜೇಂದರ ನಗರ ಅಂಚೆ , ಹೈದರಾಬಾದು- 500030