1. ಕಣ್ಣಿನಲ್ಲಿ ಕಸ ಬಿದ್ದರೆ ಔಡಲ ಎಣ್ಣೆಯನ್ನು (ಹರಳೆಣ್ಣೆ) ತಲಾ 1 ಹನಿ ಬಿಡಬೇಕು.2. ಕಣ್ಣು ಉರಿ ಬರುತ್ತಿದ್ದರೆ ಕಣ್ಣಿಗೆ ಎಳ್ಳೆಣ್ಣೆ ಅಥವಾ ಔಡಲ ಎಣ್ಣೆ ತಲಾ 1 ಹನಿ ಹಾಕಬೇಕು.3. ದಿನಾಲು ತಲೆಗೆ ತಣ್ಣೀರು ಸ್ನಾನ ಮಾಡಬೇಕು.4. ಕಣ್ಣು ಮಂದವಾಗಿದ್ದರೆ, ಕಣ್ಣಿಗೆ ಬೇವಿನ ಗಿಡದಲ್ಲಿ ಇಟ್ಟ ಜೇನನ್ನು ತಲಾ 1 ಹನಿ ಹಾಕಬೇಕು.5. ಕಣ್ಣನ್ನು ಶುದ್ಧ ತಣ್ಣೀರಿನಲ್ಲಿ ದಿನಾಲು ಅದ್ದಿ ಕಣ್ಣಿನ ರೆಪ್ಪೆ ಬಡಿದರೆ ದೃಷ್ಟಿ ದೋಷವಾಗುವುದಿಲ್ಲ.6. ಕಣ್ಣು ಕೆಂಪಾಗಿದ್ದರೆ ದಿನಾಲು ಎಳನೀರಿನ ತಲಾ 2 ಹನಿ ಹಾಕಬೇಕು.7. ಕಣ್ಣಿನ ಬಹುತೇಕ ತೊಂದರೆಗಳಿಗೆ ದಿನಾಲು ಸರ್ವಾಂಗಾಸನ ಮಾಡುವುದು ಒಳ್ಳೆಯದು.8. ಕಣ್ಣಿನ ದೃಷ್ಟಿ ದೋಷಕ್ಕೆ ಹಸಿರು ತರಕಾರಿ ವಿಶೇಷವಾಗಿ ಕಿರುಕಸಾಲಿ, ಹಕ್ಕರಕಿ, ಹೊನ್ನಗೊನೆ ಸೊಪ್ಪು ಅತ್ಯಂತ ಶ್ರೇಷ್ಠ ಔಷಧ. ಎಲ್ಲ ವ್ಯಾಧಿಗಳಿಗೆ ಸಂಬಂಧಪಟ್ಟ ಪಥ್ಯ ಕ್ರಮಗಳನ್ನು ಸೂಚಿಸಲಾಗಿದೆ. ಅವುಗಳನ್ನು ಅನುಸರಿಸುವುದು. - ಹನುಮಂತ ರಾವ್ ಮಳಲಿ ಮೂಲ: ವಿಕ್ರಮ