ಕಾರಣ

ಮೂಗಿನ ಗಾಯ

ವಾತಾವರಣದ ಶುಷ್ಕತೆಯಿಂದ ಮೂಗಿನ ಒಳಭಾಗ ಒಣಗುವುದು.

ಕಠಿನ ಪರಿಶ್ರಮ

ಏರಿದ ರಕ್ತದ ಒತ್ತಡ

ಹೆಚ್ಚಿನ ಎತ್ತರದ ಪ್ರದೇಶದಲ್ಲಿರುವುದು

ಗಟ್ಟಿಯಾಗಿ ಸೀನುವುದು

ಮೂಗಿನಿಂದ ರಕ್ತ ಸುರಿದಾಗ ಏನು ಮಾಡಬೇಕು ?

ಕುಳಿತು ಕೊಳ್ಳಿ

ರಕ್ತವು ಗಂಟಲಿಗೆ ಹೋಗದಂತೆ ಮುಂದಕ್ಕೆ ಬಾಗಿ.

ತಂಪಾದ ಒದ್ದೆ ಟವೆಲ್ ಅನ್ನು ಮೂಗಿನ ಮೇಲೆ ಇರಿಸಿ. ರಕ್ತನಾಳಗಳು ಸಂಕುಚಿತಗೊಂಡು ರಕ್ತಸ್ರಾವ ನಿಲ್ಲುವುದು .

ಮೂಗಿನ ಒಂದು ಹೊಳ್ಳೆ ಯಿಂದ ರಕ್ತ ಬರುತ್ತಿದ್ದರೆ ಅದರ ಮೇಲ್ಭಾಗವನ್ನು ಒತ್ತಿ ಹಿಡಿಯಿರಿ

ಎರಡೂ ಕಡೆ ರಕ್ತ ಬರುತ್ತಿದ್ದರೆ ಮೂಗನ್ನು 10 ನಿಮಿಷ ಒತ್ತಿ ಹಿಡಿಯಿರಿ.

ರಕ್ತ ಬರುವುದು ಮುಂದುವರಿದರೆ ಇನ್ನೂ 10 ನಿಮಿಷ ಒತ್ತಿ ಹಿಡಿಯಿರಿ.

ಮೂಗಿನ ಗಾಯದಿಂದಾಗಿ ರಕ್ತ ಸ್ರಾವವಾಗುತ್ತಿದರೆ ಹಗುರವಾಗಿ ಹಿಡಿಯಿರಿ.

ರಕ್ತ ಸ್ರಾವ ಹೆಚ್ಚಾದರೆ ಅಥವ ಪದೇ ಪದೇ ಮುಂದುವರೆದರೆ ವೈದ್ಯರ ಸಲಹೆ ಪಡೆಯಿರಿ

ಮೂಲ:ಪೋರ್ಟಲ್ ತಂಡ