ವಿಪರೀತ ಮಾನಸಿಕ ಒತ್ತಡ, ಶೀಘ್ರಕೋಪ, ಆತಂಕ, ಉದ್ವೇಗ ಹಾಗೂ ಖಿನ್ನತೆ ಹೃದಯದ ತೊಂದರೆಗೆ ಕಾರಣವಾಗುತ್ತದೆ. ಊಟದಲ್ಲಿ ಜಡ ಆಹಾರ, ಅತಿಯಾದ ಜಿಡ್ಡು ಪದಾರ್ಥಗಳು, ಕರಿದ ಪದಾರ್ಥಗಳು, ಮಾಂಸ, ಬೇಕರಿ ತಿನಿಸು, ತಂಪುಪಾನೀಯ, ತಂಗಳು ಆಹಾರವು ಕಾರಣವಾಗುತ್ತವೆ. ರೋಗಮುಂಜಾಗ್ರತೆ ಹಾಗೂ ನಿರ್ಮೂಲನೆಗೆ ಮನೆಮದ್ದು1. ದಿನಾಲು ಊಟದಲ್ಲಿ ಹಸಿ ಬೆಳ್ಳುಳ್ಳಿ ಎಸಳು 5 ಸೇವಿಸುವುದು.2. ಹಸಿರು ತರಕಾರಿ, ಮೊಳಕೆ ಕಾಳು, ಹಣ್ಣು ಹೆಚ್ಚಿಗೆ ಸೇವಿಸುವುದು.3. ರಾತ್ರಿ ಉಪವಾಸ ಮಾಡುವುದು, ತಿಳಿ ಆಹಾರ ಸೇವಿಸುವುದು. 4. ಊಟದಲ್ಲಿ ಸೈಂಧ್ರ ಲವಣ, ಕಾಳು ಮೆಣಸು, ಬೆಲ್ಲ, ನಿಂಬೆ ಹುಳಿ ರುಚಿಗಾಗಿ ಉಪಯೋಗಿಸುವುದು. 5. ದಿನಾಲು 2 ಸಲ ತುಳಸಿ ಕಷಾಯ ಸೇವಿಸುವುದು.6. ದಿನಾಲು 2 ಸಲ ಅಮೃತ ಬಳ್ಳಿ ಕಷಾಯವನ್ನು ಸೇವಿಸಬಹುದು.7. ದಿನಾಲು 1 ಸಾರಿ ಸೋರೆಕಾಯಿ ರಸ ಸೇವಿಸುವುದು.8.ದಿನಾಲು ಬೆಳಿಗ್ಗೆ ಮತ್ತು ರಾತ್ರಿ 2 ಲೋಟ ಬಿಸಿ ನೀರು ಸೇವಿಸುವುದು.9. ದಿನಾಲು ತಲೆ ಸ್ನಾನ ಮಾಡುವುದು. ನಿತ್ಯ ನಡಿಗೆ ಒಳ್ಳೆಯದು.10. ದಿನಾಲು ಯೋಗ ಪ್ರಾಣಾಯಾಮ ನುರಿತವರಿಂದ ತಿಳಿದು ಮಾಡುವುದು.11. ದಿನಾಲು 1 ಲೋಟ ಆಕಳ ಹಾಲಿಗೆ 2 ಚಮಚ ಜೇನು ಹಾಕಿ ಸೇವಿಸುವುದು.12 ದಿನಾಲು 3 ಚಮಚ ಗೋಮೂತ್ರ (ದೇಶಿ ಆಕಳ) ಅಥವಾ ಗೋ ಅರ್ಕ ಸೇವಿಸುವುದು. ಹನುಮಂತ ರಾವ್ ಮಳಲಿ ಮೂಲ: ವಿಕ್ರಮ