ಅರಿಶಿನವು ಚರ್ಮದ ಕಾಂತಿವರ್ಧಕವಾಗಿ ಬಳಸಲ್ಪಡುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ನೆಗಡಿ, ಕೆಮ್ಮು, ಗಂಟಲು ನೋವುಗಳಲ್ಲಿ ಅರಿಶಿನದ ಪುಡಿಯನ್ನು ಹಾಲಿನಲ್ಲಿ ಹಾಕಿ ಕುದಿಸಿ ಸಕ್ಕರೆ ಹಾಕಿ ಕೊಡಬೇಕು. ಅರಿಶಿನದಲ್ಲಿ ಗಾಯವನ್ನು ಗುಣಪಡಿಸುವ ಶಕ್ತಿಯಿದೆ. ಇದೊಂದು ಅತ್ಯುತ್ತಮ ರೋಗನಿರೋಧಕವಾಗಿದೆ. ಚರ್ಮವ್ಯಾಧಿಗಳಿಗೆ ಅರಿಶಿನವನ್ನು ತೇಯ್ದು ಬಳಸಲಾಗುತ್ತದೆ. ಮೂಲ: ವಿಕ್ರಮ