ಬೆಳ್ಳುಳ್ಳಿಯು ನಮ್ಮ ಅಡುಗೆ ಮನೆಯಲ್ಲಿಸಿಗುವ ಔಷಧಿಗಳಲ್ಲಿ ಒಂದು. ಬೆಳ್ಳುಳ್ಳಿಯಿಂದ ನಿವಾರಣೆಯಾಗುವ ರೋಗಗಳು 1 ಪಾರ್ಶ್ವವಾಯು : ಅರ್ಧ ತೊಲೆ ಬೆಳ್ಳುಳ್ಳಿ ಅರೆದು ಒಂದು ಲೋಟ ಹಾಲಿನೊಡನೆ ಕಾಯಿಸಿ ರಾತ್ರಿ ಮಲಗುವಾಗ ಕುಡಿಯುವುದು. 2 ರಕ್ತದ ಒತ್ತಡ, ವಾಯುರೋಗ, ಕೆಮ್ಮು, ದಮ್ಮು : ಪ್ರತಿದಿನ ಆಹಾರದೊಡನೆ ಸೇವಿಸುವುದು. 3 ಕೀವು ಸೋರುವ ಹುಣ್ಣುಗಳು : ಬೆಳ್ಳುಳ್ಳಿಯ ಕಷಾಯದಿಂದ ತೊಳೆದು ಎಣ್ಣೆಯಲ್ಲಿ ಕುದಿಸಿ ತಯಾರಿಸಿದ ಬೆಳ್ಳುಳ್ಳಿಯ ಸಾರವನ್ನು ಹುಣ್ಣುಗಳಿಗೆ ಹಚ್ಚಬೇಕು. 4 ಉಬ್ಬಸ : ಈ ರೋಗಿಗಳು ಪ್ರತಿದಿನ ರಾತ್ರಿ ಮಲಗುವುದಕ್ಕೆ ಮುಂಚೆ ಒಂದು ಚಾ ಚಮಚದಷ್ಟು ಬೆಳ್ಳುಳ್ಳಿ ರಸವನ್ನು ಅಷ್ಟೇ ಪ್ರಮಾಣದ ಜೇನು ತುಪ್ಪದೊಂದಿಗೆ ಕಲಸಿ ಸೇವಿಸಿದರೆ ಫಲಕಾರಿ. ಮೂಲ: ವಿಕ್ರಮ