ಬೀದಿ ಬದಿಯಲ್ಲಿ ಆಹಾರ ಸೇವಿಸುತ್ತೀರ ಅಂದರೆ ಅದು ಬಿಸಿಬಿಸಿಯಾಗಿದ್ದರೆ ಮಾತ್ರ ಸೇವಿಸಿ. ಹೊರಗಡೆ ನೀರು ಕುಡಿಯಬೇಡಿ. ನಿಮ್ಮ ಜತೆ ಕಾಯಿಸಿ ಆರಿಸಿದ ನೀರು ಸದಾ ಇರಲಿ. ಪ್ರತಿ ಬಾರಿ ಆಹಾರ ಸೇವಿಸುವಾಗ ಕೈ ತೊಳೆಯಿರಿ. ಪೌಷ್ಟಿಕಾಂಶವಿರುವ ಆಹಾರ ಸೇವನೆ ಉತ್ತಮ ನೀವು ಭೇಟಿ ನೀಡುವ ಹೋಟೆಲ್ನ ಸ್ವಚ್ಛತೆ, ವಾತಾವರಣದ ಬಗ್ಗೆ ಪೂರ್ವ ಮಾಹಿತಿ ಇರಲಿ. ಸಾಂಕ್ರಮಿಕ ರೋಗಗಳ ಕಾಲ ಇದು. ಹೊರಗಡೆ ಹೆಚ್ಚು ತಿನ್ನುವುದು ಬೇಡ. ತೆರೆದಿಟ್ಟ ಹಣ್ಣು, ತಿನಿಸುಗಳಿಂದ ದೂರವಿರಿ. ಜ್ಯೂಸ್ ಬದಲು ಎಳೆನೀರು ಕುಡಿಯುವುದು ಒಳ್ಳೆಯದು. ವಾಟರ್ ಪಾರ್ಕ್, ಸ್ವಿಮ್ಮಿಂಗ್ಪೂಲ್ನಲ್ಲಿ ಹೆಚ್ಚು ಹೊತ್ತು ಕಳೆಯಬೇಡಿ ಪದೇಪದೆ ಕೈಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಮೂಲ: ಡಾ.ಕರವೀರ ಪ್ರಭು, ಕ್ಯಾಲಕೊಂಡ