ಏಲಕ್ಕಿ ಪರಿಮಳಯುಕ್ತ ಪದಾರ್ಥ. ಹೆಚ್ಚಾಗಿ ಸಾಂಬಾರ ಪದಾರ್ಥವಾಗಿ ಉಪಯೋಗವಾಗುವ ಇದು ಹೊಂದಿರುವ ಔಷಧೀಯ ಉಪಯೋಗಗಳು ಅಸಂಖ್ಯ. ಗಿಡದ ಬುಡದಲ್ಲಿ ಬೆಳೆಯುವ ಇದು ವಾಣಿಜ್ಯ ಬೆಳೆಯಾಗಿಯೂ ಪ್ರಸಿದ್ಧಿ.ಇತ್ತೀಚೆಗೆ ಕ್ಯಾನ್ಸರ್ ನಿರೋಧಕ ಶಕ್ತಿ ಏಲಕ್ಕಿಗಿದೆ ಎಂಬುದು ಬೆಳಕಿಗೆ ಬರುತ್ತಲೇ ವೈದ್ಯಕೀಯ ಸಂಶೋಧನಾ ರಂಗಗಳಲ್ಲಿ ಇದರ ಬೇಡಿಕೆ ಹೆಚ್ಚಾಗಿದೆ. ಆದರೆ ಇದಕ್ಕೂ ಮೊದಲೇ ನಮ್ಮ ಹಿರಿಯರು ಪ್ರತಿದಿನವೂ ಏಲಕ್ಕಿಯ ಉಪಯೋಗವನ್ನು ಮನೆಗಳಲ್ಲಿ ಕಡ್ಡಾಯಗೊಳಿಸಿದ್ದಿದ್ದು ಅವರ ಆರೋಗ್ಯ ಕಾಳಜಿಯನ್ನು ತೋರಿಸುವುದು ಸುಳ್ಳಲ್ಲ. ಇಂದಿಗೂ ಉಟವಾದ ತಕ್ಷಣ ವೀಳ್ಯದೆಲೆಯ ಬದಲಾಗಿ ಕೆಲವರು ನಾಲ್ಕು ಏಲಕ್ಕಿ ಕಾಳನ್ನು ಅಗಿದು ತಿನ್ನುವ ರೂಢಿ ಇಟ್ಟುಕೊಂಡಿರುವುದನ್ನು ನೋಡಿರಬಹುದು. ಅದಕ್ಕೆ ಮುಖ್ಯ ಕಾರಣ ಏಲಕ್ಕಿಯಲ್ಲಿರುವ ಜೀರ್ಣಕಾರಕ ಶಕ್ತಿ.ಜೀರ್ಣಕ್ರಿಯೆಯನ್ನು ಸರಾಗಗೊಳಿಸುವುದಷ್ಟೇ ಅಲ್ಲದೇ, ಏಲಕ್ಕಿ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಅವುಗಳಲ್ಲಿ ಮುಖ್ಯವಾದವು… ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಏಲಕ್ಕಿ ಸಹಕಾರಿ ಉಸಿರಾಟದಲ್ಲಿ ತಾಜಾತನ ಇರಬೇಕೆಂದರೆ ಏಲಕ್ಕಿಯನ್ನು ಅಗಿಯಬಹುದು. ಇದು ಶ್ವಾಸಕೋಶ ಸಂಬಂಧೀ ಕಾಯಿಲೆಗಳನ್ನೂ ನಿವಾರಿಸುವ ಶಕ್ತಿಯನ್ನು ಹೊಂದಿದೆ. ಮೂತ್ರಸಂಬಂಧಿಕಾಯಿಲೆಗಳನ್ನೂ ಇದು ನಿವಾರಿಸುವ ಶಕ್ತಿಯನ್ನು ಹೊಂದಿದೆ. ಏಲಕ್ಕಿ ಚಹ ಸೇವಿಸುವುದರಿಂದ ಖಿನ್ನತೆ ಮಾಯವಾಗುತ್ತದೆಯಂತೆ! ಇದು ವೈಜ್ಞಾನಿಕವಾಗಿ ಸಾಬೀತಾಗದಿದ್ದರೂ ಆಯುರ್ವೇದವಂತೂ ಇದನ್ನು ಒಪ್ಪಿಕೊಂಡಿದೆ. ನೆಗಡಿ ಮತ್ತು ಕೆಮ್ಮನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ಸಂಶೋಧನೆಗಳ ಪ್ರಕಾರ ಕ್ಯಾನ್ಸರ್ ಗುಣಪಡಿಸುವ ಶಕ್ತಿ ಏಲಕ್ಕಿಗಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಗಳೂ ನಡೆಯುತ್ತಿವೆ. ಅತೀ ರಕ್ತದೊತ್ತಡವನ್ನು ಕಡಿಮೆಗೊಳಿಸಲು ಏಲಕ್ಕಿ ಸಹಕಾರಿ ಶ್ವಾಸಕೋಶದಲ್ಲಿ ನೋವುಂಟಾದರೆ ಏಲಕ್ಕಿ ಸೇವನೆಯಿಂದ ನಿವಾರಣೆಯಾಗುತ್ತದೆ. ಆ್ಯಸಿಡಿಟಿಯಿಂದ ತೇಗು ಬರುತ್ತಿದ್ದರೆ ಏಲಕ್ಕಿ ಸೇವನೆಯಿಂದ ಕಡಿಮೆಯಾಗುತ್ತದೆ. ರಕ್ತ ಹೆಪ್ಪುಗಟ್ಟುವ ಅಪಾಯವನ್ನು ಇದು ತಡೆಗಟ್ಟುತ್ತದೆ. ರಕ್ತ ಸಂಚಾರ ಸರಾಗವಾಗಲು ಸಹಾಯಮಾಡುತ್ತದೆ. ಹೃದಯದ ಆರೋಗ್ಯವನ್ನೂ ಸಮಸ್ಥಿತಿಯಲ್ಲಿಡಲು ಇದು ಸಹಕಾರಿ. ಅಸ್ತಮಾ ಸಮಸ್ಯೆಯಿಂದ ಬಳಲುವವರು ಹೆಚ್ಚು ಏಲಕ್ಕಿ ಉಪಯೋಗಿಸುವುದು ಒಳ್ಳೆಯದು. ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ. ನಿಯಮಿತವಾಗಿ ಏಲಕ್ಕಿ ಸೇವಿಸುವುದರಿಂದ ಕೂದಲಿನ ಆರೋಗ್ಯವೂ ಚೆನ್ನಾಗಿರುತ್ತದೆ ಎಂಬುದೂ ಸಂಶೋಧನೆಯಿಂದ ಸಾಬೀತಾಗಿದೆ. ಮೂಲ: ವಿಕ್ರಮ